YOURS IS THE LAMP, YOURS IS THE AIR, LET NOT THE LIGHT SHADE
Under God's Protection painting Original Poem: ದೀಪವು ನಿನ್ನದೇ ಗಾಳಿಯು ನಿನ್ನದೇ ಚಿತ್ರ : ಮೈಸೂರು ಮಲ್ಲಿಗೆ ರಚನೆ : ಡಾ . ಕೆ . ಎಸ್ . ನರಸಿಂಹಸ್ವಾಮಿ ಗಾಯನ : ಸಿ . ಅಶ್ವಥ್ ದೀಪವು ನಿನ್ನದೆ , ಗಾಳಿಯು ನಿನ್ನದೆ , ಆರದಿರಲಿ ಬೆಳಕು ಕಡಲು ನಿನ್ನದೆ , ಹಡಗು ನಿನ್ನದೆ , ಮುಳುಗದಿರಲಿ ಬದುಕು ಬೆಟ್ಟವು ನಿನ್ನದೆ , ಬಯಲು ನಿನ್ನದೆ , ಹಬ್ಬಿ ನಗಲಿ ಪ್ರೀತಿ ನೆರಳು , ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ ಆಗೊಂದು ಸಿಡಿಲು , ಈಗೊಂದು ಮುಗಿಲು , ನಿನಗೆ ಅಲಂಕಾರ ಅಲ್ಲೊಂದು ಒಂದು ಹಕ್ಕಿ , ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ಕಡಲು ನಿನ್ನದೆ , ಹಡುಗು ನಿನ್ನದೆ , ಮುಳುಗದಿರಲಿ ಬದುಕು ಅಲ್ಲಿ ರಣ ದುಂದುಭಿ , ಇಲ್ಲೊಂದು ವೀಣೆ , ನಿನ್ನ ಪ್ರತಿಧ್ವನಿ , ಆ ಮಹಾಕಾವ್ಯ , ಈ ಭಾವಗೀತೆ , ನಿನ್ನ ಪದಧ್ವನಿ ದೀಪವು ನಿನ್ನದೆ , ಗಾಳಿಯು ನಿನ್ನದೆ , ಆರದಿರಲಿ ಬೆಳಕು ಕಡಲು ನಿನ್ನದೆ , ಹಡಗು ನಿನ್ನದೆ , , ಮುಳುಗದಿರಲಿ ಬದುಕು Transliteration: deepavu ninadE gaaLiyu ninadE Movie: Mysooru Mallige Poet: Dr. K.S. Narasimhaswami Singer: C Ashwath d eepavu ninna de , gaaLiyu ninnade , aa r adi r a l i beLaku k adalu ninnade , hadagu ninnade , muLugadirali baduku b ettavu ninnade , bayal...